ಅಮರೇಶ್ವರ
	ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನಲ್ಲಿರುವ ಒಂದು ಕ್ಷೇತ್ರ. ವರ್ಷಕೊಮ್ಮೆ ಜಾತ್ರೆಯಾಗುತ್ತದೆ. ಇಲ್ಲಿ ಸಮಾಧಿಸ್ಥನಾಗಿರುವ ಶರಣ ಅಮರೇಶ್ವರ 17ನೆಯ ಶತಮಾನದವನೆಂದು ಕಾಣುತ್ತದೆ. ಈತನ ವಿಷಯವಾಗಿ ಅನೇಕ ಪವಾಡಗಳನ್ನು ತಿಳಿಸುವ ಕಥೆಗಳನ್ನು ಈ ಭಾಗದಲ್ಲಿ ಹೇಳುತ್ತಾರೆ. ಈತನನ್ನು ಕುರಿತು ಅಮರೇಶ್ವರ ಪುರಾಣ ಮೊದಲಾದ ಗ್ರಂಥಗಳು ಹುಟ್ಟಿವೆ. ಶ್ರೀಮಾದೇಶ್ವರದಲ್ಲಿದ್ದಂತೆ, ಈ ಕ್ಷೇತ್ರದಲ್ಲಿ ಮದ್ಯ, ಮಾಂಸ, ಸ್ತ್ರೀಯರನ್ನು ವರ್ಜಿಸಲಾಗಿದೆ.   			   
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ